‘ರಸಿಕ ಪುತ್ತಿಗೆ’ ಎಂದೇ ಖ್ಯಾತರಾದ ಪಿ.ಸುಬ್ರಹ್ಮಣ್ಯ ಆಚಾರ್ಯರು ೧೯೩೨ ಜೂನ ೧೫ರಂದು ಕಾರ್ಕಳ ತಾಲೂಕಿನ ಪುತ್ತಿಗೆಯಲ್ಲಿ ಜನಿಸಿದರು. ಇವರ ತಾಯಿ ನಾಗವೇಣಿ ಅಮ್ಮ; ತಂದೆ ವೆಂಕಟರಮಣಾಚಾರ್ಯ. == ಶಿಕ್ಷಣ ಹಾಗು ವೃತ್ತಿ == ಹಿಂದಿ ಭಾಷೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಹಿಂದಿ ಶಿಕ್ಷಕರಾದ ಆಚಾರ್ಯರು,ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ.(ಕನ್ನಡ) ಪದವಿ ಹಾಗು ಭಾಷಾ ಶಿಕ್ಷಣದಲ್ಲಿ ಡಿಪ್ಲೋಮಾ ಪಡೆದರು. == ಸಾಹಿತ್ಯ ಸೇವೆ == ‘ರಸಿಕ ಪುತ್ತಿಗೆ’ ಹೆಸರಿನಲ್ಲಿ ಆಚಾರ್ಯರು ಮಕ್ಕಳಿಗಾಗಿ ಅನೇಕ ಕಥೆ, ಕಾದಂಬರಿ, ನಾಟಕ ಹಾಗು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಮಕ್ಕಳಿಂದ ನಾಟಕಗಳನ್ನು ಆಡಿಸಿದ್ದಾರೆ. ಆಕಾಶವಾಣಿಯಲ್ಲಿ ಕಥೆ ಹಾಗು ಕವನಗಳನ್ನು ಓದಿದ್ದಾರೆ. == ಕೃತಿಗಳು == === ಕಥಾಸಂಕಲನ === ಕೊಂಬಿನ ಕಂಬಯ್ಯ ಇಲಿಗೆ ಅಂಜಿದ ಹುಲಿ ನೀತಿ ಕಥೆಗಳು ತುಂಟಾಟದ ಕಥೆಗಳು ಸುಕ್ಕಿನುಂಡೆ ಸುಬ್ಬ ಮತ್ತು ಇತರ ಕಥೆಗಳು ತಪೋವನದ ಸಾಹಸಿಗಳು === ನಾಟಕ === ಸತಿ ಅನುಸೂಯಾ ತಿಲೋತ್ತಮೆ ವೀರ ಜಟಾಯು ಮರೆವೊ ಮರೆವು ಸುಂದೋಪಸುಂದ ಅಗ್ನಿಪರೀಕ್ಷೆ === ಕಾದಂಬರಿ === ಪಿತ್ರಾರ್ಜಿತ === ಮಕ್ಕಳ ಕಾದಂಬರಿ === ಕೆಂಪು ಕಾದಂಬರಿ ಮಾರುತಿ ಶಾಲೆ ಹುಡುಗರು ಮೂವರು ಮಾಣಿಗಳು === ಜೀವನಚರಿತ್ರೆ === ಸೂರದಾಸ ತುಳಸಿದಾಸ ಸುಭದ್ರಾಕುಮಾರಿ ಚೌಹಾಣ ಟಿ.ಎಲ್.ವಾಸ್ವಾನಿ ಕುರಿಯ ವಿಠ್ಠಲಶಾಸ್ತ್ರಿ ಕೋಟಿ ಚನ್ನಯ್ಯ === ಪರಿಚಯ ಕೃತಿ === ಕಂಬಳ-ಕೊಳಿ ಅಂಕ == ಪುರಸ್ಕಾರ == ಇವರ ‘ಕೆಂಪು ಕಾರು’ ಕೃತಿಗೆ ರಾಷ್ಟ್ರೀಯ ಪ್ರಶಸ್ತಿ () ಲಭಿಸಿದೆ.